ಅಂದಿಗೂ- ಇಂದಿಗೂ

ಕವಿತೆ ಅಂದಿಗೂ- ಇಂದಿಗೂ ನಾಗರೇಖಾ ಗಾಂವಕರ ನಾನು ಹುಟ್ಟಿದಾಗ ಇದೆಲ್ಲ ಇರಲೇ ಇಲ್ಲ,ಬಣ್ಣಬಣ್ಣದ ಅಂಗಿ ತೊಟ್ಟು,ಕೇಕು ಚಾಕಲೇಟುಗಳ ಹಂಚಿರಲೇ ಇಲ್ಲ. ಅಡಿಯಿಡಲು ಕಲಿತಂತೆ ಕೋಳ್ಗಂಬಕ್ಕೆ ಕಟ್ಟಿದಕಾಲಕುಣಿಕೆ ಬಿಚ್ಚಿ ಹೊರಗಡಿಯಿಟ್ಟಾಗಚೂಪುಕಲ್ಲೊಂದು ಕಾಲ ಬಗೆದಾಗಕಲ್ಲಿಗೆ ಎರಡೇಟು ಬಿಗಿದುಮತ್ತೆ ನಡೆದಾಗ ನನಗೆಭಯವಾಗಿರಲಿಲ್ಲ, ನೋವೂ.. ಅಮ್ಮನ ಕೈ ತೊಟ್ಟಿಲತೂಗಲೇ ಇಲ್ಲ.ಜೋಗುಳವ ಅವಳಿಗೆಂದೂಹಾಡಲಾಗಲೇ ಇಲ್ಲ,ಹಗಳಿರುಳು ದುಡಿದ ಮೈ ಹಾಸಿಗೆಕಂಡಾಗ ಬಿದ್ದದ್ದು, ಮರುದಿನ ಎದ್ದದ್ದು,ಮತ್ತೆ ಬಗಲಿಗೇರಿದ್ದು,ಅದೇ ಹರಕು ಬುಟ್ಟಿ, ಅದರಲ್ಲೆರಡು ರೊಟ್ಟಿತುತ್ತಿನ ಚೀಲ ತುಂಬಬೇಕಿತ್ತಲ್ಲಮತ್ತೆ ಗದ್ದೆ ಹಾಳೆಯ ಮೇಲೆ ಕಟ್ಟಿಟ್ಟಹುಲ್ಲಿನ ಹೊರೆ ಅವಳಿಗಾಗೇಕಾದಿರುತ್ತಿತ್ತಲ್ಲ,ಆದರವಳ ಪ್ರೀತಿಯ ಬೆಚ್ಚನೆಯ … Continue reading ಅಂದಿಗೂ- ಇಂದಿಗೂ